Madhyapradesh : ಮತದಾನ ಮಾಡಿದ ನಾಲ್ವರಿಗೆ ಸಿಕ್ಕಿತು ವಜ್ರದ ಉಂಗುರದ ಗಿಫ್ಟ್ – ಆದ್ರೆ ಕೆಲವೇ ಹೊತ್ತಲ್ಲಿ ಎದುರಾಯ್ತು ಆಘಾತ !!

Madhyapradesh: ದೇಶದಲ್ಲಿ ಈಗಾಗಲೇ 3 ಹಂತದಲ್ಲಿ ಲೋಕಸಭಾ ಚುನಾವಣೆ(Parliment Election)ನಡೆದಿದೆ. ಚುನಾವಣೆಯಲ್ಲಿ ಮತದಾರರನ್ನು ಮತದಾನ ಮಾಡಲು ಸೆಳೆಯಲು ಕೆಲವು ಸಂಸ್ಥೆಗಳು ಆಕರ್ಷಕ ಉಡುಗೊರೆಗಳನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರು ಮತದಾರರಿಗೆ ಅದೃಷ್ಟ ಒಲಿದು ಬಂದಿದ್ದು ವೋಟ್ ಮಾಡಿದ ನಾಲ್ವರು ಜಂಟಿಯಾಗಿ ವಜ್ರದ ಉಂಗುರಗಳನ್ನು ಗೆದ್ದಿದ್ದ ಘಟನೆ ನಡಿದೆದೆ.

ಇದನ್ನೂ ಓದಿ: Bank of Baroda: ರಿಸರ್ವ್ ಬ್ಯಾಂಕ್ನಿಂದ ಗುಡ್ ನ್ಯೂಸ್! ಬ್ಯಾಂಕ್ ಆಫ್ ಬರೋಡಾಗೆ ಬಿಗ್ ರಿಲೀಫ್!

ಮಧ್ಯಪ್ರದೇಶದ(Madhyapradesh) ಭೋಪಾಲ್‌ನಲ್ಲಿ ಈ ಒಂದು ಅಪರೂಪದ ಘಟನೆ ನಡೆದಿದೆ. ಆದರೆ ಇದಾದ ಬಳಿಕ ದೊಡ್ಡ ಆಘಾತ ಕೂಡ ಎದುರಾಗಿದೆ. ಹೌದು, ಮೇ 7ರಂದು ಮಧ್ಯಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯಿತು. ಭೋಪಾಲ್‌ನಲ್ಲಿ(Bhopal) ಶೇಕಡಾವಾರು ಮತದಾನವನ್ನು ಹೆಚ್ಚಿಸಲು ವಿನೂತನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಮತದಾರರಿಗೆ ಬಂಪರ್ ಆಫರ್‌ಗಳನ್ನು ಘೋಷಿಸಲಾಗಿತ್ತು. ಅದರಂತೆ ಲಕ್ಕಿ ಡ್ರಾದ ಭಾಗವಾಗಿ ನಾಲ್ವರು ಮತದಾರರು ವಜ್ರದ ಉಂಗುರಗಳನ್ನು ಗೆದ್ದಿದ್ದಾರೆ. ರಿಂಗ್ ಪಡೆದ ಮತದಾರರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈ ಸಂತಸ ತುಂಬಾ ಸಮಯ ಉಳಿಲಿಲ್ಲ.

ಯಾಕೆಂದರೆ ನಾಲ್ವರು ಮತದಾರರಿಗೆ ಲಾಟರಿ ಬಹುಮಾನವಾಗಿ ನೀಡಲಾದ ‘ಡೈಮಂಡ್’ ಉಂಗುರಗಳು(Diamond Ring)’ಅಮೆರಿಕನ್ ವಜ್ರಗಳು ಎಂದು ತಿಳಿದುಬಂದಿದೆ. ಇದು ನಿಜವಾದ ವಜ್ರಗಳಲ್ಲ ಎಂದು ನಂತರ ಗೊತ್ತಾಗಿದೆ. ಅಂದಹಾಗೆ ಕ್ಕಿ ಜ್ಯುವೆಲರ್ಸ್‌ ಬೈರಾಗರ್ ಎಂಬ ಹೆಸರಿನ ಸಣ್ಣ ಪೆಟ್ಟಿಗೆಗಳಲ್ಲಿ ಉಂಗುರಗಳು ಬಂದಿದ್ದವು. ಶೀಘ್ರದಲ್ಲೇ, ಅದರ ಮಾಲೀಕ ಮಹೇಶ್ ದದ್ಲಾನಿಗೆ ಕರೆಗಳು ಬರಲಾರಂಭಿಸಿದವು. ಆದರೆ, ಉಂಗುರಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ದದ್ಲಾನಿ ಹೇಳಿದ್ದಾರೆ. ಈ ಪೆಟ್ಟಿಗೆಯನ್ನು ಕಷ್ಟ ವ್ಯಾಪಾರಿ ಸಂಘದ ಅಧ್ಯಕ್ಷ ವಾಸುದೇವ್‌ ವಾಧ್ವಾನಿ ಅವರು ಜಿಲ್ಲಾಡಳಿತಕ್ಕೆ ಒದಗಿಸಿದ್ದಾರೆ ಎಂದು ಹೇಳಿದರು. ಇದಾದ ಬಳಿಕ ವಾಧ್ವಾನಿ ಅವರನ್ನು ಸಂಪರ್ಕಿಸಿದಾಗ, ಇದು ಅಮೇರಿಕನ್ ವಜ್ರ. ಜಿಲ್ಲಾಧಿಕಾರಿಗಳು ಭೋಪಾಲ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್‌ನ ಸಭೆಯನ್ನು ಕರೆದಿದ್ದರು ಮತ್ತು ನಮಗೆ ಉಡುಗೊರೆ ವಸ್ತುಗಳನ್ನು ನೀಡುವಂತೆ ಕೇಳಿದ್ದರು. ನಾವು ನೀಡಿದ್ದು ವಜ್ರದ ಉಂಗುರವಾಗಿರಲಿಲ್ಲ ಎಂದಿದ್ದಾರೆ.

ಇದು ಸುದ್ದಿಯಾಗಲಾರಂಭಿಸಿದಾಗ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಮಾತನಾಡಿ, ಜನರು ಹೊರಗೆ ಬಂದು ಮತದಾನ ಮಾಡಲು ಉತ್ತೇಜನ ನೀಡುವ ಸಲುವಾಗಿ ಇದನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಉಂಗುರದಲ್ಲಿರುವ ವಜ್ರವು ನೈಸರ್ಗಿಕವೋ ಅಥವಾ ಲ್ಯಾಬ್ ನಿರ್ಮಿತವೋ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಅದರಲ್ಲಿ ಚಿನ್ನವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.